ಬೇಂದ್ರೆಯಂತೆ ಬೇಯಲೆಂದು
ನಾಡನುಡಿಯ ಕೇಳಲೆಂದು ನಡೆನಡೆಯುತ ಬಂದೆನುಬಿಸಿಲ ಬೇಗೆ ಬಸ್ಸ ಹೊಗೆಅಟ್ಟಹಾಸಿ ಕಾರ ವಿಕಾರ ನಗೆಬೆಳಗು ಬೈಗಿನುದ್ದಕೂ ಬೈಕ ಭರಭರ ಕೊರಳಿರದ ಕಂಠಗಳ ಭೀಕರ ಹೂಂಕಾರ ತುಟಿಗಳಾಡುತಿದ್ದರೂ ಮಾತು ಕೇಳದಾದವು ಹೊರಟ ದನಿಗಳಲ್ಲಲ್ಲೇ ತಾವು ಸತ್ತು ಬಿದ್ದವು ಶ್ರವಣವಿಲ್ಲ ಶ್ರಾವಣವಿಲ್ಲ ಎಲ್ಲ ಒಣ ಒಣ ಮಾತು ಮೂಕವಾಯಿತಲ್ಲ ಎಲ್ಲ ಭಣಭಣ ಒಂದು ಚೂರು ಬೇಯಲಿಲ್ಲ ಬಳಲಿ ಬೆಂಡಆದೆನು ಅನುಭವದಭಾವದಲಿ ಕನಲಿ ಕವನ ಕಾರಿದೆನು.
ಮುಂಬೈಯ ಬಾತ ಬಾಯಿ
ಬಾಯ್ಮುಂದ ಮಾತ ಮಾಯಿ"ತಾಜಿ"ನ ತಾಜಾ ತೇಜಕೆಡುಕೀಗೆ ಒಡಕ ಗಾಜಆ "ನಾರಿ ಮಾನ" ಮಾರಿ"ತ್ರಿನೀತಿಗೆ" ಭೀತಿ ಬೀರಿಇರುಳಿನಲಿ ನುಸುಳಿ ಅರಿಯುಗುರಿಯಿರದೆ ಗುಂಡಗರೆದು ಅರಿವಿರದ ನರರ ಮೇಧಅರಿವಳಿದು ತಿಳಿವು ಕಳೆದು ಹೊರೆಯಣ್ಣ ನೆರೆಯ ಪಾಕನೆರೆವಿಗೆಲಾ!"ವಂಗ"ಪಾಕಪಾಕಿನ ಪಾಕ ಮಾಡಿಕೈ-ಕಮಲ-ಕುಡುಗೋಲು ಕೂಡಿ?ನರೇಂದ್ರನುಡಿಗಿಲ್ಲ ಖಬರುಅಚ್ಯುತ ಪಟ್ಟ-"ಪಟ್ಟಿ" ಪೊಗರುವಿಜಯವೇ ಹೇಮಂತರಿಗೆ?ಅಶೋಕವೇ ಸಂದೀಪರಿಗೆ?ಕಾದಿಹೆವು ಕಾದುವೆವು ಕೊರಗದಿರಿಸಂಹರಿಸಿ ಮಡಿದರೂ ಮರುಗದಿರಿಅಟ್ಟುವೆವು ಮೆಟ್ಟುವೆವು ನಾವು ಬಲವಂತ ಆದರೀ, ಸರಕಾರೀ ಅಪಚಾರ ಬೇಡ ಭಗವಂತ!!!