Friday, July 13, 2007

ನಗೆಹನಿಗಳು

ಬೆಳಕು

ಬೆಳಕು

ಟೀಚರ್: ಶಬ್ದ ಮತ್ತು ಬೆಳಕುಗಳಲ್ಲಿ ಯಾವುದು ವೇಗವಾಗಿ ಚಲಿಸುತ್ತದೆ?
ಮೋಹನ: ಬೆಳಕು
ಟೀಚರ್: ಅದನ್ನು ಹೇಗೆ ಸಿದ್ಧಪಡಿಸುತ್ತಿಯ?
ಮೋಹನ: ಮಿಂಚಿದಾಗ ಅದು ನಮಗೆ ಮೊದಲು ಕಾಣುತ್ತದೆ ನಂತರ ಗುಡುಗು ಕೇಳುತ್ತದೆ.
ಟೀಚರ್: ಸರಿ
ಗುಂಡ: ನನಗನಿಸುತ್ತದೆ ಶಬ್ದವೇ ಬೆಳಕಿಗಿಂತ ವೇಗವಾಗಿ ಚಲಿಸುವುದು.
ಟೀಚರ್: ಅದು ಹೇಗೆ?
ಗುಂಡ: ನಮ್ಮ ಮನೆಯಲ್ಲಿ ನಾನು ಜನರೇಟರ್ ಶುರು ಮಾಡಿದಾಗ, ಮೊದಲು ಶಬ್ದ ಬರುತ್ತದೆ, ನಂತರ ಬೆಳಕು ಬರುತ್ತದೆ

Wednesday, July 11, 2007

!!

ಲಂಡನ್ನಿನಲ್ಲಿ
ಭಿಕ್ಷೆ ಬೇಡಲೂ ಸಹ
ಬೇಕು ಲೈಸೆನ್ಸು
ಕಟ್ಟಬೇಕು ಟ್ಯಾಕ್ಸು.

?೨

ಕಣ್ಣುಗಳು ಮೂರುಂಟು ಮುಕ್ಕಣ್ಣನಲ್ಲ
ಮೈ ಬಣ್ಣ ಬದಲಿಸುವುದು ಊಸರವಳ್ಳಿಯಲ್ಲ
ಬಣ್ಣ ಬದಲಾದಂತೆ ಜಗ ನಿಂತು ನಡೆಯುವುದು
ಬಲ್ಲವರು ಗುಟ್ಟಿದನರಿತು ಪೇಳುವರಲ್ಲ.

ಟ್ರಾಫಿಕ್ ಲೈಟು.

ಒಗಟುಗಳು

?೧
?೨

ನೀಲುಗಳು

ಪಳಿಯೊಳಿಕೆ
ಚಂಡಾಟ
!!

ಚಂಡಾಟ

ಚಂಡನಳೆದಾಡಿದ ದಾಂಡಿಗ
ಚಂಡಾಡಿ ಗಂಡುಗಲಿಯಾದ
ಚಂಡಿಗನಳೆದಾಡಿದವ
ಚರಂಡಿ ಪಾಲಾದ.

ಪಳಿಯೊಳಿಕೆ

ಮನವನುತ್ಖನಿಸಿದರೆ
ಸಿಗುವವು ಮತ್ತೆ ಮತ್ತೆ
ಅವೇ (ನೆನ)ಪಳಿಯೊಳಿಕೆಗಳು.

?೧

ಬಾಯಲ್ಲಿ ಜನರನುಗುಳಿ ನುಂಗುವುದು
ಮುಚ್ಚಿದ ಬಾಯ ಕಚ್ಚಿ ಓಡುವುದು
ಬಾಯಲ್ಲದ ಬಾಯಲ್ಲಿ ಮಾತನಾಡುವುದು
ನೆಲದ ಬಾಯೊಳು ಮುಳುಗಿ ಮಾಯವಾಗುವುದು.

-ಲಂಡನ್ ಟ್ಯೂಬ್ ಟ್ರೈನು